ಭಾನುವಾರ, ಜುಲೈ 31, 2022

ಕವನ: ರೈತ ಮತ್ತು ಯೋಧ

 ಭುವಿಗೆ ನಮಿಸಿ ಬಿತ್ತನೆ ಮಾಡುವ ರೈತ,

ತಾಯಿಗೆ ನಮಿಸಿ, ತಾಯ್ನಾಡನು ರಕ್ಷಿಸುವ ಯೋಧ,

ದೇಶದ ಪ್ರಗತಿಗೆ ಇವರು ಸದಾ ಸಿದ್ಧ...  ||ಪ||


ಆಡಂಬರ, ಆಭರಣಗಳ ಜಗವನು ಮರೆಯುವ,

ಬೆವರಿನ ಬೇಗೆಯಲಿ ಫಲವನು ಬಯಸುವ,

ಕುಟುಂಬದ ಮೋಹವನು ಗಡಿಯಲಿ ಮರೆಯುವ, 

ನೆತ್ತರಿನ ರೂಪದಲಿ  ಭದ್ರತೆ ನೀಡುವ…    ||೧||


        ರಾಜಕಾರಣಿಗಳ ಆಶ್ವಾಸನೆ ಸಾಲದ ಮನ್ನ,

ಈಡೇರುವುದೋ ಇಲ್ಲವೋ ನೇತಾರ ಸಾಯುವ ಮುನ್ನ,

ಪರಾಜಯವಾಗದಿರು ಎನ್ನುತಿಹುದು ಯೋಧನ ಮನ,

ವೈರಿಯ ಸದೆಬಡಿದು ಬಿಟ್ಟನು ಉಸಿರನ್ನ…||೨||


ಸಾಲದ ಸುಳಿಯಲ್ಲಿ ಸಿಕ್ಕಿರುವ ಚಿಂತೆ,

ಆತ್ಮಹತ್ಯೆಗೆ ಶರಣಾಗಬಾರದು ರೈತನು ಮತ್ತೆ,

ನೋಡಲಾಗದು ಮಡಿದ ಸೈನಿಕನ ಹೆತ್ತವರ ವ್ಯಥೆ,

ಅವರಿಗೂ ತಿಳಿದಿಹುದು ಮಗನಾದ ಅಮರಕಥೆ… ||೩||


- ಆಶಿಕಾ ನೆಲ್ಲಿಕಟ್ಟೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...