ಭುವಿಗೆ ನಮಿಸಿ ಬಿತ್ತನೆ ಮಾಡುವ ರೈತ,
ತಾಯಿಗೆ ನಮಿಸಿ, ತಾಯ್ನಾಡನು ರಕ್ಷಿಸುವ ಯೋಧ,
ದೇಶದ ಪ್ರಗತಿಗೆ ಇವರು ಸದಾ ಸಿದ್ಧ... ||ಪ||
ಆಡಂಬರ, ಆಭರಣಗಳ ಜಗವನು ಮರೆಯುವ,
ಬೆವರಿನ ಬೇಗೆಯಲಿ ಫಲವನು ಬಯಸುವ,
ಕುಟುಂಬದ ಮೋಹವನು ಗಡಿಯಲಿ ಮರೆಯುವ,
ನೆತ್ತರಿನ ರೂಪದಲಿ ಭದ್ರತೆ ನೀಡುವ… ||೧||
ರಾಜಕಾರಣಿಗಳ ಆಶ್ವಾಸನೆ ಸಾಲದ ಮನ್ನ,
ಈಡೇರುವುದೋ ಇಲ್ಲವೋ ನೇತಾರ ಸಾಯುವ ಮುನ್ನ,
ಪರಾಜಯವಾಗದಿರು ಎನ್ನುತಿಹುದು ಯೋಧನ ಮನ,
ವೈರಿಯ ಸದೆಬಡಿದು ಬಿಟ್ಟನು ಉಸಿರನ್ನ…||೨||
ಸಾಲದ ಸುಳಿಯಲ್ಲಿ ಸಿಕ್ಕಿರುವ ಚಿಂತೆ,
ಆತ್ಮಹತ್ಯೆಗೆ ಶರಣಾಗಬಾರದು ರೈತನು ಮತ್ತೆ,
ನೋಡಲಾಗದು ಮಡಿದ ಸೈನಿಕನ ಹೆತ್ತವರ ವ್ಯಥೆ,
ಅವರಿಗೂ ತಿಳಿದಿಹುದು ಮಗನಾದ ಅಮರಕಥೆ… ||೩||
- ಆಶಿಕಾ ನೆಲ್ಲಿಕಟ್ಟೆ