ಗಾಳಿಪಟವೆ ಗಾಳಿಪಟವೆ
ಎಲ್ಲಿ ಹಾರುವೆ? ||
ಗಾಳಿ ಜೊತೆಗೆ ಮೇಲೆ ಹೋಗಿ
ಕಾಣೆಯಾಗುವೆ ||
ದಾರ ಹಿಡಿದು ಜಗ್ಗುತಿರಲು
ಮೇಲೆ ಹೋಗುವೆ ||
ಮೇಲೆ ಹೋಗಿ ಬಾನಿನಲ್ಲಿ
ಚಿಕ್ಕದಾಗುವೆ ||
ಮೇಲಿನಿಂದ ನನ್ನ ನೋಡಿ
ನಗುವ ಬೀರುವೆ ||
ನನ್ನ ಜೊತೆ ದಾರದಿಂದ
ಮಾತನಾಡುವೆ ||
ಹಕ್ಕಿಯಂತೆ ಮೇಲೆ ಸಾಗಿ
ತೇಲುತಲಿರುವೆ ||
ಗಾಳಿನಿಂತ ಮೇಲೆ ನೀನು
ನೆಲಕೆ ಬೀಳುವೆ ||
ಗಾಳಿ-ದಾರ ಇದ್ದರೇನೆ
ನೀನು ಆಡುವೆ ||
ನೀನು ಹಾರುತಿರಲು ನನಗೆ
ಖುಷಿಯ ನೀಡುವೆ ||
- ಚರಣ್ ರಾಜ್ ಯಡಾಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ