ಶುಕ್ರವಾರ, ನವೆಂಬರ್ 27, 2020

ಕವನ - ೧ 'ಸೂರ್ಯೋದಯ'

 


ಮೂಡಣದಿ ಬಾನು ರಂಗೇರುತಿರುವಾಗ

ಅರುಣನ ದರ್ಶನವು ಸೂರ್ಯನ ಜೊತೆಗಾಗ

ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು

ಬರಿಗಣ್ಣಿಗದುವೆ ಬರಿಯ ಬೆಳಗಾಗಿಹುದು ||

                    ಮೌನದಿಂ ಜೀವಿಗಳು ಎಚ್ಚೆತ್ತುಕೊಂಡಿರಲು

                    ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು

                    ಮಾನವನ ದಿನಚರಿಯು ಮನದಿ ಭುಗಿಲೆದ್ದಿಹುದು

                    ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||

ರಾತ್ರಿ ಮೌನವ ಕಳೆದು ಚೀರಾಟದೆಡೆಗಳಲಿ

ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ

ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ

ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ. ||

                                                    - ಚರಣ್ ರಾಜ್ ಯಡಾಡಿ


ಪದಗಳ ಅರ್ಥ

ರಂಗೇರು = ಕೇಸರಿ ಬಣ್ಣಕ್ಕೆ ತಿರುಗು

ಅರುಣ = ಸೂರ್ಯನ ಸಾರಥಿ

ಇಂಚರ =ಇಂಪಾದ ಧ್ವನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು

 ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...