ಅಜ್ಜ ಮಗನಿಗೆ ಶಿಸ್ತಿನ ಸಿಪಾಯಿ
ಮೊಮ್ಮಗನಿಗೆ ಕರುಣೆಯ ಕಡಾಯಿಮಗನ ಗುಣಗಾನ ಅತಿ ವಿರಳ
ಮೊಮ್ಮಗನ ಗುಣಗಾನ ಹೇರಳ
ಮಗನಲ್ಲಿ ಸಲುಗೆ ಕಾಣದಾಯಿತು
ಮೊಮ್ಮಗನಿಗೆ ಅಜ್ಜನೆ ಸಲುಗೆಯ ಸರದಾರ
ಅಮ್ಮನ ರೌದ್ರಾವತಾರಕ್ಕೇ ಶಾಂತದಲಿ
ಅಜ್ಜಿಯಾಗುವಳು ಕೋಲಿಗೆ ಬೇಲಿ
ಮಗುವಿನ ಅಳುವಿನಲಿ ಅಮ್ಮನ ನೋವಿರುವುದುಅಜ್ಜಿಯ ತಡೆಯಲಾರದ ಅಳುವಿರುವುದು
ಅಪ್ಪ ಕಾಸಿಗೆ ಕಡಿವಾಣ ಹಾಕಿ ಕಾಯಿಸಿದರೆ
ಅಜ್ಜ ಕೆಳಿದ್ದೆಲ್ಲವನ್ನು ತಟ್ಟನೆ ಕೊಡಿಸಿದರು
ಮಗನ ಶಿಸ್ತಿನಲ್ಲಿ ಅಪ್ಪನ ಹೆಮ್ಮೆ ಕಾಣುವುದು
ಮೊಮ್ಮಗನ ತುಂಟಾಟದಲಿ ಅಜ್ಜನ ಚೇಷ್ಟೆ ಕಾಣುವುದು.
- ಚರಣ್‌ರಾಜ್ ಯಡಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ