ಕನ್ನಡದ ವರ್ಣಮಾಲೆಯ ಸರಳ, ಸವಿಸ್ತಾರವಾದ ವಿವರಣೆ.
ಭಾನುವಾರ, ನವೆಂಬರ್ 29, 2020
ಕನ್ನಡ ವರ್ಣಮಾಲೆ-ಚರಣ್ ರಾಜ್ ಯಡಾಡಿ. History Of Kannada_alphabet-Charanraj_yadady
ಕನ್ನಡ ಭಕ್ತಿಗೀತೆಗಳು. Kannada_Devotional songs
ಭಕ್ತಿಗೀತೆಯ ಸವಿಯನ್ನು ಸವಿಯಲು ಈ ವೀಡಿಯೋ ಮೇಲೆ ಕ್ಲಿಕ್ಕಿಸಿ.
ಮನೋರಂಜನೆಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ....
https://www.youtube.com/playlist?list=PLgaAsYGxhlXqtCgur7coTGfg1YNbpiNkH
ಶುಕ್ರವಾರ, ನವೆಂಬರ್ 27, 2020
ಕನ್ನಡ ವ್ಯಾಕರಣ ಪಾಠಗಳು.
ಈ ಮೇಲಿನ ಲಿಂಕ್ ಬಳಸಿ ನಿಮ್ಮ ನೆಚ್ಚಿನ ವ್ಯಾಕರಣ ಪಾಠಗಳನ್ನು ಸರಳವಾದ ಸೂತ್ರ ಹಾಗೂ ವ್ಯಾಖ್ಯಾನಗಳ ಮೂಲಕ ತಿಳಿಯಿರಿ.
ಕವನ- ೨ 'ಜ್ಯೋತಿ'
ಉರಿಯುತ್ತ ಪ್ರಜ್ವಲಿಪ ನಾನು ಜ್ಯೋತಿ
ಕರಗುತ್ತ ಪ್ರಜ್ವಲಿಪ ನಾನು ಜ್ಯೋತಿ
ಉರಿಯುತ್ತ ಕರಗಿದರು ನನಗದುವೆ ತೃಪ್ತಿ
ಬೇಡುವೆನು ದೇವರಲಿ ಜಗದಗಲ ವ್ಯಾಪ್ತಿ ||
ಕತ್ತಲಲಿ ಮೂಡಿಸುವೆ ಬೆಳಕಿನ ಅಸ್ಥಿತ್ವ
ಮನದ ಕತ್ತಲೆಯನು ನೂಕುವೆಯಾ ನಿತ್ಯ
ಜಗವೆ ಮುಖ ಮಾಡಿಹುದು ಬೆಳಕಿನತ್ತ
ಅದ ಕಳೆದ ಮೇಲೆ ಎಲ್ಲವೂ ಮೌನದತ್ತ ||
ಲವಲೇಷ ತೋರುವುದು ಇರುವಷ್ಟು ಹೊತ್ತು
ಆರಿಹೋದರೇನು ಮರಳಿ ಮೂಡುವುದು ಹೊತ್ತು
ತಾನುರಿದು ಜಗವನ್ನೆ ಬೆಳಗಿಸುವ ಬತ್ತಿ
ಈ ಮಾಯೆಯಲಿ ಇದುವೆ ಪ್ರತ್ಯಕ್ಷ ಶಕ್ತಿ ||
- ಚರಣ್ ರಾಜ್ ಯಡಾಡಿ
ಪದಗಳ ಅರ್ಥ
1. ಪ್ರಜ್ವಲಿಪ = ಪ್ರಕಾಶಿಸುವ
2. ವ್ಯಾಪ್ತಿ = ವಿಶಾಲತೆ
3. ಅಸ್ಥಿತ್ವ = ಇರುವಿಕೆ
4. ಲವಲೇಷ = ಉಳಿದ ಭಾಗ, ಶೇಷ, ಉಳಿಕೆ
5. ಪ್ರತ್ಯಕ್ಷ = ಕಣ್ಣಿಗೆ ಕಾಣುವ, ನೇರ
ಕವನ - ೧ 'ಸೂರ್ಯೋದಯ'
ಮೂಡಣದಿ ಬಾನು ರಂಗೇರುತಿರುವಾಗ
ಅರುಣನ ದರ್ಶನವು ಸೂರ್ಯನ ಜೊತೆಗಾಗ
ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು
ಬರಿಗಣ್ಣಿಗದುವೆ ಬರಿಯ ಬೆಳಗಾಗಿಹುದು ||
ಮೌನದಿಂ ಜೀವಿಗಳು ಎಚ್ಚೆತ್ತುಕೊಂಡಿರಲು
ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು
ಮಾನವನ ದಿನಚರಿಯು ಮನದಿ ಭುಗಿಲೆದ್ದಿಹುದು
ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||
ರಾತ್ರಿ ಮೌನವ ಕಳೆದು ಚೀರಾಟದೆಡೆಗಳಲಿ
ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ
ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ
ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ. ||
- ಚರಣ್ ರಾಜ್ ಯಡಾಡಿ
ಪದಗಳ ಅರ್ಥ
ರಂಗೇರು = ಕೇಸರಿ ಬಣ್ಣಕ್ಕೆ ತಿರುಗು
ಅರುಣ = ಸೂರ್ಯನ ಸಾರಥಿ
ಇಂಚರ =ಇಂಪಾದ ಧ್ವನಿ
ಬೇಸಿಗೆ ರಜೆಯಲ್ಲಿ ಓದಬಹುದಾದ ಕನ್ನಡ ಪುಸ್ತಕಗಳು
ರಜೆ ಎಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮನೋರಂಜನೆ, ಕಾಲಹರಣ, ಒಂದಿಷ್ಟು ಸಂಶೋಧನೆ, ಹೊಸ ಸ್ಥಳಗಳ ದರ್ಶನ ಹೀಗೆ ಹತ್ತು ಹಲವಾರು. ಇಂತಹ ಅನೇಕ ಮನಸ್ಸುಗಳ ನಡುವೆ ಸಾಹಿತ್ಯದ ...
-
Study Card (2024-25) ತತ್ಸಮ-ತದ್ಭವ ಅರ್ಥ ವ್ಯತ್ಯಾಸ ಪ್ರಬಂಧಗಳು Sahodaya kannada paper set-1 (2024-25) Sahodaya Kannada paper set-2 (2024-25) ...
-
ಮಾತು ಜಾರದಂತೆ ನೋಡಿಕೊಳ್ಳಿರಿ ಮಾತಾಡುವಾಗ । ನಾಲಿಗೆಯನು ॥ಪ॥ 👅 ಸಾರವ...

